ಬುಧವಾರ, ಅಕ್ಟೋಬರ್ 1, 2014

"ಕೆಸರ ಕುಸುಮ"


ಬೀಗುತಿರೆ ಬೀಗುತಿರೆ ಭಾರತೀಯರು
ನಿನ್ನನ್ನು ಪಡೆದ ನಾವು ಧನ್ಯರು   ||   || 

ಪದಕ ಒಂದು
ನೋವು ನೂರಾ ಒಂದು
ಬದುಕೆಂಬ ಬಿರುಗಾಳಿ
ಹೊಡೆ-ಬಡಿಯ ಬಡಿತಿರೆ
ಅಲೆ-ಅಲೆಯೂ ಕೂಡ
ಎಡೆ-ಬಿಡದೆ ಕೊರೆತಿರೆ
ಬದುಕಲ್ಲಿ ಕಷ್ಟ ಸುಖವು
ಮರೆ-ಮರೆಯಾಗಿ ಬರುತಿರೆ
"ಕೆಸರ ಕುಸುಮ"ವು 
ಸುಗಂಧ ಫಸರಿಸುತಿರೆ
ಮುಸ್ಸಂಜೆ ಮರೆಯಾಗಿ
ಕತ್ತಲು ದೂರಾಗಿ
ಮೂಡುತಿದೆ ಆಶಾಕಿರಣ
ಯುವ ಪೀಳಿಗಿಗೆ  || 1  ||

ನೂರಾರು ನೋವುಂಡು
ಎದೆತಟ್ಟಿ, ತೊಡೆತಟ್ಟಿ
ಎದುರಾಳಿ ಎದೆಮುರಿದು
ಮತ್ತೊಮ್ಮೆ ಧರೆಗುರುಳಿ
ಎದ್ದೆದ್ದು ಬಿದ್ದೆದ್ದು
ನವರಾತ್ರಿ ಮಾಸದಲಿ
ಚಂಡಿ ಚಾಮುಂಡಿ
ರೂಪ ಪ್ರತಿರೂಪ  || 2 ||

ಅಷ್ಟಷ್ಟು ಬೇಕಷ್ಟು
ಗಿರಗಿರನೆ ತಿರುವ್ಯಾಡಿ
ವೈರಿಯು ಮುಗ್ಗರಿಸಿ
ಸೋಲೂ ಚಪ್ಪರಿಸಿ
ಬರಗೆಟ್ಟ ಸಮಾಜ
ದಿಕ್ಕೆಟ್ಟು ದಿಕ್ಕರಿಸಿ
ಮಗಳಾಗಿ, ವಧುವಾಗಿ
ತಾಯಿ, ಹೆಂಡತಿಯಾಗಿ
ನೂರಾರು ಸೋದರರಿಗೆ
ಪ್ರೀತಿಯ ಅಕ್ಕನಾಗಿ
ಅನಂತ ಆಶಾಕಿರಣ
ಭರವಸೆಯ ಹೊತ್ತೊಯ್ದು
ಕಾಶ್ಮೀರ-ಕನ್ಯಾಕುಮಾರಿ
ಅರುಣಾಚಲ-ಗುಜರಾತ
ಪದಕ ಪ್ರೀತಿಯ ಹಂಚಿ  || 3  ||

ಬೀಗುತಿರೆ ಬೀಗುತಿರೆ ಭಾರತೀಯರು
ನಿನ್ನನ್ನು ಪಡೆದ ನಾವು ಧನ್ಯರು   ||   || 

( ಪ್ರದೀಪ ದೇವಾಡಿಗ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ