ಭಾನುವಾರ, ಸೆಪ್ಟೆಂಬರ್ 28, 2014

ಮತ್ತೊಮ್ಮೆ ಹುಟ್ಟಿದ "ನರೇಂದ್ರ"


"ನಮೋ"ರಿಕಾನೋ, ಅಮೇರಿಕಾನೋ
ಮ್ಯಾಡಿಸನ್ನೋ, ಮೋದಿಸನ್ನೋ
ದಶಾವತಾರವೋ, ವಿಶ್ವರೂಪವೋ
ಕಳೆದಿತ್ತು ನೋಡಿ ಅಂಧಕಾರವು || 1 ||

ಪ್ರಧಾನಮಂತ್ರಿಯೋ, ಚಾಣಾಕ್ಷತಂತ್ರಿಯೋ
ಅಭಿವೃದ್ದಿ ಹರಿಕಾರನೋ, ಸ್ವಚ್ಛತೆ ಗೆಣೆಕಾರನೋ
ದೇಶದ ಶಕ್ತಿ ಪರಿಚಯಿಸಿದ ಮೋದಿ
ಜಗವೇ ಒಳಗಾಗಿತ್ತು ಭಾರತದ ಮೋಡಿ || 2 ||

ರಾಜ ದೇಸಾಯಿಯೋ, ರಾಣಿ ಸಾಗರಿಕೆಯೋ
ಮೊಸರಲ್ಲಿ ಕಲ್ಲು ಹುಡುಕುವ ಹುಚ್ಚರೋ ಬೆಪ್ಪರೋ
ಥರ ಥರ ಥರಗುಡಬೇಕು ಥಾಪರನು ನೋಡಿ
ಕಳೆದಿತ್ತು ಇವನ ಅಹಂಕಾರದ ಕೋಡಿ || 3 ||

ಸ್ವಚ್ಛ ಗಂಗಾ, ನಿತ್ಯ ತುಂಗಾ
ದೇಶಕ್ಕೆ ಬೇಕು ಬುದ್ದಿವಂತರ ಸಂಗ
ಪಾಲ್ಗೊಳ್ಳುವೆವು ನಾವು ಅಭಿವೃದ್ದಿಯಲ್ಲಿ
ಗೀಚುವೆವು ಹೆಸರ ಸುವರ್ಣಾಕ್ಷರದಲ್ಲಿ || 4 ||

ಒಂದಲ್ಲ ಎರಡಲ್ಲ ನೂರು ಗುಂಡಿಗೆ ಬೇಕು
ಪರದೇಶದ ನೆಲದಲ್ಲಿ ನಿಂತು ಕರೆ ಕೊಡಲು
ಭಾರತಕ್ಕೆ ಭಾರತವೇ ಅನುಭವಿಸುತಿದೀಗ
ವ್ಯಕ್ತಿಯಲ್ಲ ನೀ ಇಚ್ಛಾಶಕ್ತಿ || 5 ||

ಅನ್ನಿಸಿದೆ ನಮಗೆ, ಮತ್ತೊಮ್ಮೆ ಹುಟ್ಟಿದ
ಭಾರತವೆಂಬ ಸಂಸ್ಕೃತಿ ಕಟ್ಟಿದ್ದ
ಸನ್ಯಾಸಿಯಾಗಿ ಜಗವೆಲ್ಲ ಸುತ್ತಿದ್ದ
ನರೇಂದ್ರನೆಂಬ ನಾಮ ಹೊತ್ತಿದ್ದ || 6 ||

ಭಾರತ್ ಮಾತಾ ಕಿ ಜೈ ( ಪ್ರದೀಪ ದೇವಾಡಿಗ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ