ಶುಕ್ರವಾರ, ಸೆಪ್ಟೆಂಬರ್ 5, 2014

ಮಿತಿಯನ್ನೆಲ್ಲಾ ಮೀರಿ Marie Curie

ಅವಳು ಅಪ್ರತಿಮ ಸುಂದರಿ. ಅಸಾಧಾರಣ ಬುದ್ದಿವಂತೆ. ಅವಳ ಸೌಂದರ್ಯಕ್ಕೆ ಮರುಳಾಗದೆ ಇದ್ದವರಿರಲಿಲ್ಲ. Poland ನಲ್ಲಿ ಹುಟ್ಟಿದ್ದರೂ, ತನ್ನ ಶೈಕ್ಷಣಿಕ ವಿಧ್ಯಾಭ್ಯಾಸ ಕ್ಕಾಗಿ ಅಲ್ಪ ಸ್ವಲ್ಪ French ಅನ್ನು ಕಲಿತು France ಗೆ ಬರುತ್ತಾಳೆ. ನಂತರ France  ನಲ್ಲಿ ನಡೆದಿದೆಲ್ಲವೂ ಈಗ ಇತಿಹಾಸ. ನಾನಿಲ್ಲಿ ತೆರೆದಿಡುವಂತಹುದು ಇತಿಹಾಸದಲ್ಲಿ ಮುಚ್ಚಿಹೋದ ಪುಟಗಳ ಬಗ್ಗೆ, ಅವಳು ಅನುಭವಿಸಿದ ಮಾನಸಿಕ ಹಿಂಸೆಯ ಬಗ್ಗೆ, ಸಹೋದ್ಯೋಗಿಗಳ ಅಸಹಕಾರ, ಅಸಹನೀಯ ನಡವಳಿಕೆಗಳ ಬಗ್ಗೆ, ಜೀವನ ಪರ್ಯಂತ ಒಂದು ವ್ಯವಸ್ತಿತ Laboratory (ಪ್ರತಿಯೊಬ್ಬ ಸಂಶೋಧಕನ ಕನಸು ಇದು) ತನ್ನದಾಗಿಸಿಕೊಳ್ಳದ, ವಿಜ್ಞಾನ ಕ್ಷೇತ್ರದ ಕೊಳಕು Politics  ನ ಬಗ್ಗೆ, Independent lab ಆರಂಬಿಸಲು  grant ನೀಡದ University ಯ ಬಗ್ಗೆ, 19 ನೇ ಶತಮಾನದ Europe  ನ ಪುರುಷ ಪ್ರಧಾನ ಸಮಾಜದ ರೋಗಗ್ರಸ್ತ ಮನಸ್ತಿತಿಯ ಬಗ್ಗೆ.

ಅವಳ ಹೆಸರು Marie Curie. ತನ್ನ ಮಿತಿಯನ್ನೆಲ್ಲಾ ಮೀರಿ ಎರಡೆರಡು ನೊಬೆಲ್ ಬಹುಮಾನಗಳನ್ನು ತನ್ನದಾಗಿಸಿಕೊಂಡವಳು. Physics ನಲ್ಲಿ Doctorate ಪಡೆದ ಪ್ರಪಂಚದ ಮೊತ್ತ ಮೊದಲ ಮಹಿಳೆ. 1893 ರಲ್ಲಿ Physics ನಲ್ಲಿ 1894 ರಲ್ಲಿ Mathematics ನಲ್ಲಿ Bachelor degree ಪಡೆದ ಮೇಲೆ ಅವಳಲ್ಲಿದ್ದುದು, ವಾಪಾಸು Poland ಗೆ ಹಿಂತಿರುಗಿ ಕೆಲಸ ಮಾಡುವ ತವಕ ಮಾತ್ರ.  ಆಗಿನ ಕಾಲಕ್ಕೆ Bachelor ಬಹು ದೊಡ್ಡ degree. ಆದರೆ ಮಹಿಳೆ ಎಂಬ ಒಂದೇ ಒಂದು ಕಾರಣಕ್ಕೆ ಅವಳಿಗೆ ಸಿಗಬೇಕಿದ್ದ ಎಲ್ಲ ಶೈಕ್ಷಣಿಕ ಸ್ಥಾನಗಳನ್ನು ನಿರಾಕರಿಸಲಾಗುತ್ತದೆ. ಅಸಹನೆಯಿಂದಲೇ France ಗೆ ಹಿಂತಿರುಗುತ್ತಾಳೆ. Pierre Curie ಯ ಸಲಹೆ ಯ ಮೇರೆಗೆ ಸಂಶೋಧನೆ ಯಲ್ಲಿ ತೊಡಗಿಕೊಳ್ಳುತ್ತಾಳೆ.

ಅವಳ Doctoral Thesis  ಕಂಡು Evaluation Committee ದಂಗಾಗಿ ಹೋಗಿತ್ತು. ಅವಳ Thesis ನ Title "The New Element Radium ". ತುಂಬಾ ವಿಷಯ ಆಧಾರಿತ, ಪ್ರಯೋಗ ಗಳ ಮೂಲಕ ಸಾಬೀತುಪಡಿಸಿದ, ವೈಜ್ಞಾನಿಕ ವಿಷಯಗಳ ಬಗ್ಗೆ ಸ್ಪಷ್ಟವಾಗಿ ಬೆಳಕು ಚೆಲ್ಲುವ ಹಾಗೂ ಅದನ್ನು ನಿಖರವಾಗಿ ವ್ಯಾಖ್ಯಾನಿಸುವ ಚಂದದ ಪ್ರಭಂದ ಅದು. ಮನುಕುಲಕ್ಕೆ ಈ Thesis ನ  ಕೊಡುಗೆ ಅಪಾರವಾಗಲಿದೆ ಎಂದು Committee ಅವತ್ತೇ ಷರಾ ಬರೆದಿತ್ತು.

ಇನ್ನು 1903 ರ Nobel Prize ಅವ್ಯವಸ್ತೆಯ ಆಗರವೇ ಆಗಿತ್ತು. ಸ್ವೀಡನ್ನಿನ  Nobel Committee  ಕೊನೆಗೊಳಿಸಿದ್ದು Henri Becquerel ಮತ್ತು Pierre Curie ಯ ಹೆಸರು ಮಾತ್ರ. ಆದರೆ  Radiation Phenomena ಸಂಶೋಧನೆ ಯಲ್ಲಿ ಈ ಮೂವರೂ (Henri Becquerel, Pierre Curie, Marie Curie) ಸಮಾನ ಪಾತ್ರ ವಹಿಸಿದ್ದರು.  Marie Curie ತೀವ್ರ ಆಘಾತಕ್ಕೆ ಒಳಗಾಗುತ್ತಾಳೆ. ಇದಾದ ಮೇಲೆ Pierre Curie  Nobel Committee ಗೆ ಪತ್ರ ಬರೆದು ಸಂಶೋಧನಾ ಪ್ರಭಂದದಲ್ಲಿ, ಪ್ರಯೋಗಗಳನ್ನು ಮಾಡುವಲ್ಲಿ, ಅದನ್ನು ವೈಜ್ಞಾನಿಕವಾಗಿ ವಿವರಿಸುವಲ್ಲಿ Marie Curie ಯ ಪಾತ್ರವನ್ನು ವಿವರಿಸಿದ ಮೇಲೆ Marie Curie ಯ ಹೆಸರನ್ನು ಸೇರಿಸಲಾಗುತ್ತದೆ.

ನೊಬೆಲ್ ಬಹುಮಾನ ಬಂದರೂ, ಸ್ವಂತ ಸಂಶೋಧನಗೆ ಮುಡುಪಾದ Laboratory ಕಟ್ಟಿಕೊಳ್ಳದ ಹೀನ Researcher ನ ಬದುಕು ಅವಳದು.

ಇದಾದ ಮೇಲೆ Marie Curie ಯನ್ನು ಜರೆದದ್ದು, Paul Langevin ನ ಜತೆಗಿನ ಪ್ರೇಮ ಪ್ರಕರಣಕ್ಕಾಗಿ. Pierre Curie ಸತ್ತ ನಂತರ Paul Langevin (ಖ್ಯಾತ ಭೌತ ವಿಜ್ಞಾನಿ) ನ ಜತೆಗಿನ ಪ್ರೇಮ ಜಗಜ್ಜಾಹೀರಾಗುತ್ತದೆ. ಕೊನೆಗೆ ಸಾರ್ವಜನಿಕವಾಗಿ ಒಪ್ಪಿಕೊಳ್ಳುವವರೆಗೂ, ಮಾಧ್ಯಮಗಳು, Scientific Community ಅವಳನ್ನು ಜರೆಯುತ್ತಲೇ ಇರುತ್ತದೆ. ದುರದೃಷ್ಟವಶಾತ್, Pierre Curie  ಮಾರ್ಗದರ್ಶನ ಮಾಡಿದ PhD ವಿದ್ಯಾರ್ಥಿ ಗಳಲ್ಲಿ Paul Langevin ಕೂಡ ಒಬ್ಬ.

ಇಷ್ಟೆಲ್ಲ ತಡೆಗೋಡೆಯ ನಡುವೆಯೂ ಅವಳ ಸಂಶೋಧನೆ ನಿರಂತರವಾಗಿರುತ್ತದೆ. Radium ಮತ್ತು Polonium ಕಂಡು ಹಿಡಿದು ಅದನ್ನು ಸಂಸ್ಕರಿಸಿದ್ದಕ್ಕಾಗಿ 1911 ರ Chemistry Nobel ಬಹುಮಾನ ಅವಳದಾಗುತ್ತದೆ.

ನನ್ನ ಕನಸಿನ ಹುಡುಗಿ ( My Dream Girl) ಮನಸ್ಸಿಗೆ ಬಂದಾಗಲೆಲ್ಲ, ಪ್ರತಿಕೂಲ ಪರಿಸ್ತಿತಿ ಯಲ್ಲಿ, ಶ್ರೇಷ್ಟ ಸಂಶೋಧನೆ ಮಾಡಿದ Marie Curie ನೆನಪಾಗುತ್ತಾಳೆ. ಒಬ್ಬ
1]ಶ್ರೇಷ್ಟ ತಾಯಿಯಾಗಿ: Marie Curie ಯ ಮಗಳು (Irene Joliot-Curie) ಸಂಶೋಧನಾ ಹಾದಿಯಲ್ಲಿ ತಾಯಿಯನ್ನೇ ಅನುಸರಿಸಿ 1935 ರ ನೊಬೆಲ್ ಬಹುಮಾನ ವನ್ನು  ತನ್ನದಾಗಿಸಿಕೊಳ್ಳುತ್ತಾಳೆ.
2]ಪ್ರೀತಿ ಧಾರೆ ಎರೆದ ಹೆಂಡತಿಯಾಗಿ: Pierre Curie ಅವಳಲ್ಲಿ ಎಷ್ಟು ಅನುರಕ್ತ ನಾಗಿದ್ದನೆಂದರೆ ಅವಳು France ಬಿಟ್ಟು Poland ಗೆ ವಾಪಾಸು ಹೊರಡುತ್ತೇನೆಂದಾಗ, ತನ್ನೆಲ್ಲ ಸಂಶೋಧನಾ ಸ್ಥಾನ ಗಳನ್ನು ಬಿಟ್ಟು ಅವಳ ಜೊತೆ ಹೊರಡಲು ತಯಾರಾಗಿದ್ದ.
3]Extraordinary Collaborator ಆಗಿ: Pierre Curie Doctorate  ಮಾಡುವಾಗಿನಿಂದ ಹಿಡಿದು ಆತನ ಎಲ್ಲ ಸಂಶೋಧನಾ ವಿಷಯಗಳಲ್ಲಿ Marie Curie ಯ ಪಾತ್ರ ಸಾಕಷ್ಟಿದೆ.

ಎದುರುನೋಡುತ್ತಿದ್ದೇನೆ............(ಪ್ರದೀಪ ದೇವಾಡಿಗ)



1 ಕಾಮೆಂಟ್‌: