ಪ್ರತಿ ಶನಿವಾರ ಸಂಜೆ "ಹಸಿ-ಬಿಸಿ"ಕಟ್ಟೆಯ ಮೇಲೆ ನಾವೆಲ್ಲರೂ "ಪಿಂಕಿಮಂಜು" ಗಾಗಿ ಕಾಯುತ್ತ ಕುಳಿತಿರುತ್ತಿದ್ದೆವು. ಆಗಿನ ದಿನಗಳೇ ಹಾಗಿತ್ತು. "ಪಿಂಕಿಮಂಜು" ಬಂದು ಒಂದು ವಾರದ ಸುದ್ದಿಯ ಚೀಲ ತೆರೆದನೆಂದರೆ, "ಹಸಿ-ಬಿಸಿ" ಮಾಡಿದ "ಚಟ್ಟಂಬಡಿ" ಗಳೆಲ್ಲ ಮಾಯವಾಗಿ ಮಾತು ಮುಗಿಸುವುದು ರಾತ್ರಿ 2 ಘಂಟೆಯ ಮೇಲಾಗಿರುತ್ತಿತ್ತು. ಈ "ಹಸಿ-ಬಿಸಿ" ಯಾವುದನ್ನೂ ಸರಿಯಾಗಿ ಬೇಯಿಸುತ್ತಿರಲಿಲ್ಲ. ಚಾಪುಡಿ recycle ಮಾಡಿ ಮಾಡಿ ಮಧ್ಯ ರಾತ್ರಿ ಯ ವೇಳೆಗೆ ಚಾ, ಹಾಲಿನ ಬಣ್ಣಕ್ಕೆ ತಿರುಗುತ್ತಿತ್ತು. ಅರ್ಧ ಹರಿದ "ಚಾಗಾಳಿ" ಇಂದ ಉದುರುತ್ತಿದ್ದ ಚಾಪುಡಿ ಯ ಕಣಗಳು ಬೆಳದಿಂಗಳ ಚಂದ್ರನಂತ ಚಾ ದ ಮೇಲೆ ಕಪ್ಪು ಚುಕ್ಕೆಗಳಾಗಿರುತ್ತಿದ್ದವು. "ಬೋಳುಸುಕ್ರಯ್ಯ" ಸತ್ತು ಅದಾಗಲೇ ವರ್ಷಗಳೇ ಮೀರಿ ಹೋದ್ದರಿಂದ ಆತನ ದೆವ್ವದ ಭಯ ಕೂಡ ಇರಲಿಲ್ಲ. ಎಲ್ಲರ ಗಮನ ಇರುತ್ತಿದ್ದುದು "ಪಿಂಕಿಮಂಜು" ಸುದ್ದಿಯ ಮೇಲೆ.
ಈ ನನ್ಮಗ ಎಲ್ಲಿಂದ ಶುರು ಮಾಡ್ತಾನೆ? ಯಾರಿಗೆ ತಂದಿಡ್ತಾನೆ? ಎಲ್ಲಿ ಮುಗಿಸ್ತಾನೆ? ಎಷ್ಟಿವೆ ಈ ವಾರ? "ಪುಟ್ಟ ಗೌರಿ" ಈ ವಾರ ಏನು ಮಾಡಿದಳು? "ಸಾನಿಯಮಿರ್ಜ಼ಾ" ಹೆಬ್ಬಾರ್ ಕಾವ್ ಗೆ ಯಾಕೆ ಹೋಗುತ್ತಾಳೆ? "ಮೂರ್ಕಟ್ಟಿ" ಹೊಂಡದಲ್ಲಿ ಸಿಕ್ಕಿಬಿದ್ದವರು ಯಾರು? "ಅಂಬಾಲಕಟ್ಟಿ" ಹೆಣದ ಬಾಳಿಗೆ ಹಾಕುವ ಲೈಟ್ ಅನ್ನು ಪ್ರತಿನಿತ್ಯ ಒಡೆಯುವವರು ಯಾರು? ಮತ್ತು ಯಾಕೆ? "ಕೆಲ್ಸಿ ಮಾರುತಿ" ಇದ್ದಕಿದ್ದ ಹಾಗೆ ಯಾಕೆ ಸಣ್ಣಗಾದ? "ಆಸರಂತಿ ಬಯಲಿ"ನಲ್ಲಿ ಸಿಕ್ಸರ್ ಹೊಡೆದವರು ಯಾರು? "ಬಾಂಬೇಶೆಟ್ಟಿ" ಕತೆ ಎಂತ? ಮೂಡಿತ್ಲು ಹೊಳೆಯಲ್ಲಿ ಏನಾಗಿತ್ತು? "ಚಣಕಿ ತಮ್ಮಣ್ಣ" ಯಾಕೆ ಊರು ಬಿಟ್ಟ? ಬಸದಿಯಲ್ಲಿ ರಾತ್ರಿ ಗುಸು ಗುಸು ಯಾಕೆ? "ಗದ್ದಿಮನಿ ಸತೀಶ" ಯಾವ ಯಾವ ಗದ್ದಿ ಹಾರಿದ್ದ? "ಜೋಗಿರವಿ" ಯ ಕತೆ ಏನು? "ಬಯಲಪ್ಪನಮನಿ ಕೋಟಿ" ಎಷ್ಟು ಕೋಟಿ ಮಾಡಿದ್ದ? "ಪುತ್ತಪ್ಪಮನಿ ಜಟ್ಟ" ಮಗನಿಗೆ ಏನು ಮಾಡಿಟ್ಟ? "ಕನ್ನಿಮನಿ ಪ್ರಕಾಶ" ರೈಲ್ರಸ್ತಿ ಹೊಂಡ ಯಾಕೆ ಹಾರಿದ್ದ? "ಬಳಿಕ ಬಂದವ" ಯಾರನ್ನು ಮದುವೆಯಾದ? "ಕೆಪ್ಪಸೂಸ" ನ ಬೋಟ್ ಏನಾಯ್ತು? ಹೈಂಸರ, ಗಬ್ರು ಮಾದೇವ, ಸೊನಿ ಅಣ್ಣಪ್ಪ, ಕಾಟಿ ಸುಬ್ರಯ್ಯ, ಬ್ಯಾಟಿ ಮಯ್ಯಾತ, ಯಾಕ್ "ದ೦ದಿ ಹೊಳೆ"ಗೆ ಹೋಗ್ತಾ ಇದ್ರು? ಅಮಾವಾಸ್ಯೆ ಗು "ಸಾಲ್ಗದ್ದೆ" ಗು ಏನು ನಂಟು? "ಅಮ್ಮನಂಗಡಿ ಕೂರ್ಮ" ಯಾಕಷ್ಟು ರುಚಿ? "ಕನ್ನಿಮನಿ ಮಾದೇವ" ಯಾರ್ ಕೆನ್ನೆ ಕಚ್ಚಿದ್ದ? CD ಅಂಗಡಿ ಮಂಜು ಬೆಂಗಳೂರ್ ಗೆ ಯಾಕೆ ಓಡಿ ಹೋದ? ವಿಷಯಗಳು ಒಂದೇ ಎರಡೇ fullstop ಗಳೇ ಇಲ್ಲದ ವಿಚಾರಗಳು ಅವನ ಜೋಳಿಗೆಯಲ್ಲಿ ಇರುತ್ತಿದ್ದವು.
ನಾನು ಊರು ಬಿಟ್ಟು ಹತ್ತು ವರ್ಷಗಳೇ ಆಗಿತ್ತು. ಆಗಾಗ ಊರಿಗೆ ಹೋಗುತ್ತೇನಾದರು ಎರಡು-ಮೂರು ದಿನಗಳಿಗಿಂತ ಹೆಚ್ಚಿಗೆ ನಿಲ್ಲಲು ಆಗುತ್ತಿರಲಿಲ್ಲ. ಆದರೆ ಈ ವರ್ಷ ಲೋಕಸಭಾ ಚುನಾವಣೆಗೆ ವೋಟ್ ಮಾಡಲು ಜೊತೆಗೆ ಕುಟುಂಬದ ಜೊತೆಗೆ ಹರಟಲು ಒಂದು ತಿಂಗಳು ರಜೆ ತೆಗೆದುಕೊಂಡಿದ್ದೆ.
"ಹಸಿ-ಬಿಸಿ" ಕಟ್ಟೆ ಹಾಗೆ ಇತ್ತು. ಚುನಾವಣಾ ಸಮಯ ಆದರಿಂದ ಪೇಂಟಿಂಗ್ ಕೂಡ ಆಗಿತ್ತು. ಜನರೂ ಇದ್ದರು. ಎಲ್ಲರ ಕೈಯಲ್ಲೂ ರಂಗು ರಂಗಿನ ಮೊಬೈಲು. ಯಾರಿಗೂ ಮಾತನಾಡಲು ಪುರುಸೊತ್ತಿರಲಿಲ್ಲ. ಒಂದು ಮಾತನಾಡಿ, ಮೆಸೇಜ್ ಜೊ ಗೇಮೋ ಶುರು ಮಾಡುತ್ತಿದ್ದರು. ಏನು ಇಲ್ಲ ಅಂದರೆ 5 ಸೆಕೆಂಡ್ ಗಳಿಗೊಮ್ಮೆ ಜೇಬಿನೊಳಗಿದ್ದ ಮೊಬೈಲ್ ಅನ್ನು ತೆಗೆದು unlock ಮಾಡಿ ನೋಡುವುದು. ಒಂದು ತಾಸು ಅಲ್ಲೇ ಕುಳಿತು ನಿರಾಸೆಯಿಂದ ಮನೆಗೆ ಹೋದೆ. ಹೋಗಲಿ ಶನಿವಾರ "ಪಿಂಕಿಮಂಜು" ಬಂದರೆ ಏನಾದ್ರೂ ಸುದ್ದಿ ಸಿಗಬಹುದು ಎಂದುಕೊಂಡೆ.
ನೀರಿಕ್ಷಿತ ಸಮಯಕ್ಕೆ "ಪಿಂಕಿಮಂಜು" ಬಂದವನೇ ತನ್ನ ಅಗಲವಾದ China ಸೆಟ್ ಅನ್ನು ಸರಕ್ಕನೆ ಹೊರತೆಗೆದು facebook open ಮಾಡಿ ಭರ್ರನೆ status update ಮಾಡಿಬಿಟ್ಟ. ಕ್ಷಣಾರ್ಧದಲ್ಲಿ liko, like ಗಳು, ನಾನಾ comment ಗಳು, ಅದು ಪುಟ್ಟ ಗೌರಿ ವಿಷಯ ಆದರಿಂದ ನಾನು like ಮಾಡಿದೆ. ವಾದ ವಿವಾದ, ತಪ್ಪು ಸರಿ, proof ಎಲ್ಲ ಸೇರಿ, comment ಗಳ ಸಂಖ್ಯೆ ನೂರು ದಾಟಿ ಬಿಟ್ಟವು. ತಾಸು ಒಂದಾಯಿತು. ಎರಡಾಯಿತು. ಮೂರಾಯಿತು. ಏನೇನು ಮಾತುಕತೆಯಿಲ್ಲ. ಮೊಬೈಲ್ ನ ಟಿಕ್ ಟಿಕ್ ಶಬ್ದವನ್ನು ಹೊರತುಪಡಿಸಿ. ಎಂಥ ಕರ್ಮ ಮಾರಾಯ ಅಂದುಕೊಂಡೆ.
Technology ಬಳಸಿಕೊ ಸಿದ್ದ ಅಂದ್ರೆ .......ಅಂಡು ತೊಳೆಯಲು ಯಾವುದಿದೆ technology ಅಂತ ಕೇಳಿದ್ನಂತೆ.........( ಪ್ರದೀಪ ದೇವಾಡಿಗ )
:D
ಪ್ರತ್ಯುತ್ತರಅಳಿಸಿ