ಬುಧವಾರ, ಅಕ್ಟೋಬರ್ 8, 2014

facebook


ಕ್ಷಣ-ಕ್ಷಣಕ್ಕೂ ಕಾತುರ
"Post"ಮಾಡೋ ಆತುರ

ಆಗಾಗ ಇಣುಕಿ
"Timeline" ಕೆದಕಿ

ಅರೆಬೆಂದ ವಿಚಾರ
ಅವರವರ ಆಚಾರ

"Video" ಗೆ ಬಡಿದು
ತೆರೆಮರೆಗೆ ಸರಿದು

"Status" ಸ್ಸು ಕದ್ದು
"Comment" ನಲ್ಲಿ ಒದ್ದು

ಸ್ವಲ್ಪ ಅಸೂಯೆ
ಸ್ವಲ್ಪ ಅಹಂ

ಸ್ವಲ್ಪ ಬಿಗುಮಾನ
ಅವರವರ ಜಾಯಮಾನ

ಕುಲು-ಕುಲು ಕುಲುಕುತ್ತ
ಗೆಜ್ಜೆ ಝಲಕಿಸುತ್ತ

ಧುತ್ತನೆ ಎದೆಸೀಳಿ
"ಮಣಭಾರ" comment ಗಳನ್ನು ಹೇರಿ
ತಟ್ಟನೆ ಮರೆಯಾಗುವ
ಓ.....Facebook  ರಾಣಿ
ನಾ ನಿನ್ನ ದಾಸ
( ಪ್ರದೀಪ್ ದೇವಾಡಿಗ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ