Prague ಗೆ ಬಂದು ಸುಮಾರು ಎಂಟು ತಿಂಗಳಾಗ್ತಾ ಬಂತು. ರಿಸರ್ಚ್ ನಲ್ಲಿ ಅಂತಹ ಹೇಳಿಕೊಳ್ಳುವಂತಹ ರಿಸಲ್ಟ್ಸ್ ಗಳು ಸಿಕ್ಕಿಲ್ಲವಾದರೂ, ಒಂದು ಹೊಸ ದೇಶಕ್ಕೆ ಬಂದು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು, ಹೊಸ ಸಂಸ್ಕೃತಿ ಯ ಅರಿವಿನ ಜೊತೆಗೆ, ಜನರು ಹೀಗೂ ಇರುತ್ತಾರಾ? ಸಾರ್ವಜನಿಕ ಸಾರಿಗೆ ಸಮಯಕ್ಕೆ ಸರಿಯಾಗಿ ಹೇಗೆ ಬರುತ್ತೆ? ಮೆಟ್ರೋ, ಬಸ್ ಮತ್ತು ಟ್ರ್ಯಾಮ್ ಗಳನ್ನು ಏರುವಾಗ ಜನರ್ಯಾಕೆ ಇಷ್ಟೊಂದು ಶಿಸ್ತನ್ನು ಪಾಲಿಸುತ್ತಾರೆ? ಬಟ್ಟೆಯನ್ನು ಹೀಗೂ ಕೂಡ ಹಾಕ್ಕೋಬಹುದಾ? ಈ ಮನುಷ್ಯರು ಎಲ್ಲೆಂದರಲ್ಲಿ ಯಾಕೆ ಅಪ್ಪಿ ಮುದ್ದಾಡುತ್ತಾರೆ? ಎಂಬ ಪ್ರಶ್ನಾರ್ಥಕ ಚಿಹ್ನೆಗಳೆಲ್ಲವೂ ಒಟ್ಟಾಗಿ ಕಾಡಿದ್ದು ಸುಳ್ಳಲ್ಲ.
ಬಂದ ಮೊದಲದರಲ್ಲಿ ಮನೆಯ ನೆನಪಾಗಿ ವಾರಗಟ್ಟಲೆ ಅತ್ತಿದ್ದು, ಟೆಂಪರೇಚರ್ ಬದಲಾವಣೆ ಯಿಂದ ಸ್ವಲ್ಪ ಅನಾರೋಗಕ್ಕೆ ತುತ್ತಾದದ್ದು, ಗೆಳೆಯ-ಗೆಳತಿಯರ ಮಿಸ್ ಕಾಲ್ ಗಳೆಲ್ಲ ಮಿಸ್ ಆದದ್ದು, ಮೆಸೇಜ್ ಗಳೆಲ್ಲ ಸಂಪೂರ್ಣ ವಾಗಿ ನಿಂತು ಹೋದದ್ದು, ಈಗ ಇತಿಹಾಸ.
ರವೀಂದ್ರ ಕಲಾಕ್ಷೇತ್ರ ದಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದ ಯಕ್ಷಗಾನ , ಪ್ರತಿದಿನ Identity card ಕೇಳುತ್ತಿದ್ದ IISc ಯ ಸೆಕ್ಯೂರಿಟೀ ಗಾರ್ಡ್ ನ ನಿರ್ವಿಕಾರ ನಗು, ಪ್ರಕೃತಿ ಕ್ಯಾಂಟೀನ್ ನ ರುಚಿಕಟ್ಟಾದ ಇಡ್ಲಿ-ಸಾಂಬಾರ್, ರವಾದೋಸೆ, ಕಬಿನಿಯ ಗೋಬಿಮಂಚೂರಿ, ಹಬ್ಬಹರಿದಿನ ಗಳಿಗೆಲ್ಲ ಹೋಳಿಗೆ ಊಟ ಹಾಕುತ್ತಿದ್ದ ರೂಮ್ ನ ಮಾಲೀಕರು. 15 ದಿನಗಳಿಗೊಮ್ಮೆ ಕೊರಿಯಾ ದಿಂದ ಬರುತ್ತಿದ್ದ ಸಂಜಯಣ್ಣ ನ ಕಾಲ್, K.R Prabhu lab ನ ಗ್ರೂಪ್ ಮೀಟಿಂಗ್, crude spectras, crude yield, ಊರಿನಲ್ಲಿನ ಮದುವೆ-ಮುಂಜಿ ಕಾರ್ಯಕ್ರಮಗಳು, ಹೆಬ್ಬಾರ ರ ನಿಯಂತ್ರಣದಲ್ಲಿದ್ದ "ಹೆಬ್ಬಾರ್ ಕಾವ್" ನಲ್ಲಿದ್ದ ಮಾವಿನ ಮರಕ್ಕೆ ಕಲ್ಲು ಹೊಡೆದು, ಹಣ್ಣು ಉದುರದಿದ್ದರೂ ಗುಂಪಿನಲ್ಲಿದ್ದವನ ತಲೆಯನ್ನಾದ್ರೂ ಒಡೆದು, ಧನಂಜಯ ನ ಅಪ್ಪ ಬೋಟ್ ಗೆ ಹೋಗಿ ತಂದಂತಹ ಬಂಗಡಿ ಮೀನಿ ಗೆ ಉಪ್ಪು ಕಾರ ಹಾಕಿ, ಸೀಮೆಎಣ್ಣೆ ಸ್ಟೋವ್ ಹಿಡಿದು ಕೊಟೆರಿ ಗುಡ್ಡ ಏರಿ ಅದನ್ನು ಬೇಯಿಸಿ ತಿಂದು ಕಾಡು ಹರಟೆ ಹೊಡೆದು ಮನೆಗೆ ಹಿಂತಿರುಗಿದರೆ, ಕೊಟ್ಟಿ ಸಾರಾಯಿ ಕುಡಿದು ಬರುತ್ತಿದ್ದ ಅಪ್ಪ , ಯಕ್ಷಗಾನದ ಹಾಡು ಹಾಡಿ , ನನ್ನನ್ನು ಕುಣಿಯಲು ಹಚ್ಚಿದಾಗ, ಮನೆಯ ಜಗುಲಿಯ ಮೇಲೆ ಕುಂತು ಮುಸಿ-ಮುಸಿ ನಗುತಿದ್ದ ತಂಗಿ, ತಮ್ಮಂದಿರು, ಅಮ್ಮ ಹಾಗೂ ಅಜ್ಜಿಯ ನಗುಮುಖ, ಈ ಅಪ್ಪ ಮಗನ ದೊಂಬರಾಟವನ್ನು ಸಹಿಸಲಾರದೆ ಒದರುತ್ತಿದ್ದ ಪಕ್ಕದ ಮನೆಯ ನಾಯಿ, ನಾವು ನಿದ್ರೆ ಮಾಡುವುದನ್ನೇ ಕಾದು ಕುಳಿತು ಮೈ ಏರಿ ಮಲಗುತ್ತಿದ್ದ ಮನೆಯ ಅರ್ಧ ಡಸನ್ ಬೆಕ್ಕುಗಳು, ಆಗಾಗ ಹೆಂಚಿನ ಕೆಳಗಿರುವ ಮರದ ತೊಲೆ (ಪಕಾಸು) ಗೆ ಜೋತು ಬೀಳುತ್ತಿದ್ದ ಉದ್ದದ ಕೆರೆ ಹಾವುಗಳು, ಮಳೆಗಾಲದಲ್ಲಿ ಮನೆಯ ಅಂಗಳದಿಂದ, ಮಲಗುತ್ತಿದ್ದ ಚಾಪೆಯೆಡೆಗೆ ಹಾರಿ ಬರುತ್ತಿದ್ದ ಚಿಕ್ಕ ಚಿಕ್ಕ ಕಪ್ಪೆಗಳು, ಹರಿದು ಬರುತ್ತಿದ್ದ ನಂಜು ಹುಳುಗಳು, ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ಯಂದು ಮನೆಯ ಹತ್ತಿರವಿದ್ದ ಸ್ಮಶಾನದಿಂದ ಕೇಳಿಸುತ್ತಿದ್ದ ಚಿತ್ರ-ವಿಚಿತ್ರ-ಭಯಂಕರ ಸದ್ದುಗಳು. ಎಲ್ಲವನ್ನೂ, ಎಲ್ಲರನ್ನೂ ಮಿಸ್ ಮಾಡ್ತಾ ಇದ್ದೀನಿ. ( ಪ್ರದೀಪ ದೇವಾಡಿಗ )

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ