ತಪ್ಪು ಮಾಡಿರೋ ತಮ್ಮಂದಿರಾ
ತಪ್ಪು ಮಾಡಿರೋ ಅಣ್ಣಂದಿರಾ
ಭಾರತವೆಂಬ ಬ್ರಷ್ಟ ದೇಶದೊಳು
ಆರಕ್ಷಕರು ರಕ್ಷಣೆಗೇ ಬೇಲಿ ನೆಟ್ಟಿ
ನ್ಯಾಯದೇವತೆ ಕಣ್ಣಿಗೆ ಬಟ್ಟೆ ಕಟ್ಟಿ
ಕಾನೂನು ಕಾಯುವವರೆಲ್ಲ
ಕರಿಚಾದರ ಹೊದ್ದು ಮಲಗಿರುವರಲ್ಲ
ಬೇಲಿಯೇ ಎದ್ದು ಹೊಲ ಮೇಯುತಿರಲು
"ಒಣ ಧರ್ಮ"ದ ಕೋಟೆ ಕಾವಲು ಕಾದಿರಲು
ಅಂಜಿಕೆಯಿಲ್ಲದೆ
ತಪ್ಪು ಮಾಡಿರೋ
ನೀವು
ತಪ್ಪು ಮಾಡಿರೋ
ಕೆಟ್ಟ "ರಾಜ"ನೂ
ಸೊಟ್ಟ ಕಾನೂನು
ಕರ್ತವ್ಯ ಮರೆತ ವೈದ್ಯ
"ಗಳಿಸಿದೆ" ಎಂದುಕೊಂಡ ಸದ್ಯ
ಮೂರುಬಿಟ್ಟ ಅಧಿಕಾರ ವರ್ಗ
ಹೆದರುತ್ತಿದೆ "ಕುಟುಂಬ" "ವರ್ಗ"
ನಾಚಿಕೆಯಿಲ್ಲದ ಪತ್ರಕರ್ತ
ತನ್ನ ಕರ್ತವ್ಯವನ್ನೇ ಮರೆತ
ಇದರಲ್ಲೂ ಬೇಳೆ ಬೇಯಿಸಿಕೊಳ್ಳುವ
ರಾಜಕೀಯ ಕುನ್ನಿಗಳ
ಕೊರಳ ಕೊಯ್ಯಿರೋ
ನೀಚರ
ಕೊರಳ ಕೊಯ್ಯಿರೋ
ಅತ್ಯಾಚಾರವೋ, ಅನೈತಿಕತೆಯೋ
ಮರ್ಯಾದಾಹತ್ಯೆಯೋ, ಮತ್ತೇನೋ
ನೆನಪಿರಲಿ
ಅವಳೊಬ್ಬಳಿದ್ದಳು
ಹಸಿಮೈಯ ಹೆಣ್ಣು
ಅವರು ಮೂರು ಜನ
ಸಿಕ್ಕಿದ್ದು ಅವಳ ಹೆಣ
ಒಂದಷ್ಟು ಧರ್ಮ
ಒಂದಷ್ಟು ಕರ್ಮ
ಕಲಸುಮೇಲೋಗರ ಮಾಡಿ
ಬಡಿಸಿಬಿಟ್ಟರೆ ರಾಡಿ
ರಕ್ತ ಚೆಲ್ಲಿರೋ
ಕಾಮಾಂಧರ
ರಕ್ತ ಚೆಲ್ಲಿರೋ
( ಪ್ರದೀಪ ದೇವಾಡಿಗ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ