ಗುರುವಾರ, ನವೆಂಬರ್ 6, 2014

"ಅಪ್ಪ"

ಎಲ್ಲರನ್ನೂ ಬಿಟ್ಟು
ಎಲ್ಲವನ್ನೂ ಬಿಟ್ಟು
ಇಷ್ಟು ಅವಸರವಿತ್ತೇ?

ಹೇಳದೆ ಕೇಳದೆ
ಒಂದು ಮಾತನಾಡದೆ
ಇಷ್ಟು ದಿನ ಕಾದಿದ್ದೆ
ಇಂದ್ಯಾಕೆ ಸಿಡಿದೆದ್ದೆ
ಜವರಾಯ ಬಂದ
ಸೂತಕ ತಂದ
ಬಂದದ್ದು ಸರಿಯೇ
ಹೊತ್ತು-ಗೊತ್ತಿಲ್ಲದೆ

ರಾಮಾಯಣ-ಮಹಾಭಾರತ ಭೋದಿಸುವರಿಲ್ಲ
ಚರಿತ್ರೆಯನ್ನು ವಿವರಿಸುವರಿಲ್ಲ
ವಿಚಾರಗಳನ್ನು ಅಂದೇ ಸುರಿಸಿ
ಸಮಾಜಮುಖಿ ವ್ಯಕ್ತಿತ್ವ ರೂಪಿಸಿ
ಗೆಳೆಯರು ಮಾಡಿದ ಮೋಸ
ಅರಗಿಸಿಕೊಂಡ ಆಭಾಸ
ನೀ 
ಪ್ರಾಮಾಣಿಕತೆಗೆ ಕನ್ನಡಿ
ನಿಷ್ಟೆಗೆ ಮುನ್ನುಡಿ

"ಅಪ್ಪ" ಹೋದರು
ಎಲ್ಲರನ್ನೂ ಬಿಟ್ಟು
ಎಲ್ಲವನ್ನೂ ಬಿಟ್ಟು
ನೆನಪುಗಳನ್ನು ಕೊಟ್ಟು
( ಪ್ರದೀಪ ದೇವಾಡಿಗ ) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ