ವಯಸ್ಸು ಹದಿನಾರು
ಇಳಿಬಿದ್ದ ಕಣ್ಣು
ಗುಳಿಬಿದ್ದ ಕೆನ್ನೆ
ಮನಸು ಮೂರಾಬಟ್ಟೆ
ದೇಹ ಬಯಸಿದವರಿಗೆ ಕೊಟ್ಟೆ
ನನ್ನದೆಂಬುದು ಇಲ್ಲ
ಮಕ್ಕಳಿಗಾಗಿ ಎಲ್ಲ
ಕುಣಿಯುತ್ತೇನೆ
ಸೆರಗು ಹಾಸುತ್ತೇನೆ
ಕಂದಮ್ಮಗಳ ಹಸಿವು ನೀಗಿಸಲು
ಹನ್ನೆರಡು ವಯಸ್ಸಿಗೆ ಮದುವೆಯಾದೆ
ಅಪ್ಪ ಕುಡುಕ
ಗಂಡ ತಲೆಹಿಡುಕ
ಇಬ್ಬರು ಮುದ್ದಾದ ಮಕ್ಕಳು
ಹುಟ್ಟಿಸಿದೆ ರಕ್ತ ಸುರಿಸಿ
ಒಳಗೂ, ಹೊರಗೂ
ಪುಟ್ಟ ಕಂದಮ್ಮಗಳು
ಬಟ್ಟೆ ಇರಲಿಲ್ಲ
ಹಸಿವೆಯೇ ಎಲ್ಲ
ಹಸಿವೆಯಿಂದ ಕೂಗುತ್ತಿದ್ದಾಗ
ತಡೆಯದಾದೆ
ದೇಹ ಮಾರಿಕೊಂಡೆ
ದೇಹ ಮಾತ್ರ ಮಾರಿಕೊಂಡೆ
ಪುಡಿಗಾಸಿಗೆ
ಮನಸು ಕೊಟ್ಟಾನೆಯೇ
ಭಾವನೆಗಳನ್ನು ಹಂಚಿಕೊಂಡಾನೆಯೇ
ಬಂದವರು ಬಂದರು
ಅವರವರ ಇಷ್ಟದಂತೆ
ಕೆಲವರು ತಿಕ್ಕಲರು
ಕೆಲವರು ಪುಕ್ಕಲರು
ಇನ್ನ್ ಕೆಲವರು
ಮನೆಯಲ್ಲಿ ಹೆಂಡತಿಯ ಮುಂದೆ
ಮರ್ಯಾದೆಗೆ ಅಂಜಿ
ನಾನು ವೇಶ್ಯಾಗೃಹದ ಹೆಣ್ಣು
ಸುಖಿಸುತ್ತೇನೆ "ಸುಖ" ವ ಪಡೆಯದೆ
ದುಖಿಸುತ್ತೇನೆ,ದುಡಿಯುತ್ತೇನೆ ವಿಶ್ರಾಂತಿಯಿಲ್ಲದೆ
ನನ್ನ ಮುದ್ದು ಕಂದಮ್ಮಗಳಿಗಾಗಿ
( ಪ್ರದೀಪ ದೇವಾಡಿಗ )