ಸೋಮವಾರ, ಡಿಸೆಂಬರ್ 15, 2014

ವಿಜ್ಞಾನಿಗಳೆಂದರೆ, ಸಂವೇದನಾ ಶೀಲತೆ ಇಲ್ಲದವರು, ರೋಮ್ಯಾನ್ಸ್ ಗೊತ್ತಿಲ್ಲದವರು, ಹಾಸ್ಯಪ್ರಜ್ಞೆ ಇಲ್ಲದವರು, ಪ್ರಯೋಗಗಳು ಮತ್ತು ಥಿಯರೀ ಗಳನ್ನು ಬಿಟ್ಟು ಬೇರೇನೂ ಗೊತ್ತಿರುವುದಿಲ್ಲ. ಹೆಂಡತಿಯನ್ನು ಪ್ರೀತಿಸುವುದು ಗೊತ್ತಿಲ್ಲ. ಇಂತವರನ್ನು ಮದುವೆಯಾದರೆ, ಜೀವನಪೂರ್ತಿ ಕಲ್ಲು ಬಂಡೆ ಯ ಜೊತೆ ಜೀವಿಸಬೇಕಾಗುತ್ತದೆ. ಎಂಬೆಲ್ಲ ಮಾತುಗಳಿವೆ. ನನಗನ್ನಿಸಿದ ಹಾಗೆ ವಿಜ್ಞಾನಿಗಳಷ್ಟು ಕ್ರಿಯಾಶೀಲತೆ, ಹಾಸ್ಯಪ್ರಜ್ಞೆ, ರೊಮ್ಯಾಂಟಿಕ್ ಆಗಿರುವವರು ಬೇರೊಬ್ಬರಿಲ್ಲ. ಇವರಷ್ಟು ಪ್ರೀತಿ ಮಾಡಿದವರೂ ಯಾರೂ ಇಲ್ಲ. ಇಲ್ಲಿದೆ ಕೆಲವು ಉದಾಹರಣೆಗಳು. 
Albert Einstein ತನ್ನ ಹೆಂಡತಿಯ ಜೊತೆ
ಜಗತ್ತಿಗೆ ಗುರುತ್ವ ಮತ್ತು ಚಲನೆಯ ನಿಯಮಗಳನ್ನು ಹೇಳಿಕೊಟ್ಟ, 1921 ರ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ Albert Einstein ತನ್ನ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತಿದ್ದನೆಂದರೆ, ಆತ ಬರೆದ 32,000 ( ಮೂವತ್ತೆರಡು ಸಾವಿರ ) ಪುಟಗಳ ಪ್ರೇಮಪತ್ರಗಳೇ ಸಾಕ್ಷಿ. ಮೊದಲೇ ಆತ ಕಲ್ಪನಾಜೀವಿ, ಕಲ್ಪನೆಗೆ ರೆಕ್ಕೆ ಕಟ್ಟಿ ಮನಸೋ-ಇಚ್ಛೆ ಹಾರಿಸುತ್ತಿದ್ದ. ಮನದ ವೇಗ ಬೆಳಕಿನ ವೇಗಕ್ಕಿಂತ ಹೆಚ್ಚು ಎಂದು ತೋರಿಸಿಕೊಟ್ಟವನು ಇವನೇ.
Pierre Curie ಮತ್ತು Marie Curie 
Pierre Curie 1903 ರಲ್ಲೇ ನೊಬೆಲ್ ಬಹುಮಾನ ಪಡೆದವ. Marie Curie ಯ ಗಂಡ ಈತ. ಸದಾಕಾಲ ಮೇರಿಕ್ಯೂರಿ ಯ ಹಿಂದೆಯೇ ಇರುತ್ತಿದ್ದ. ಮೇರಿಕ್ಯೂರಿ ಸೀರೆ ಉಡುತ್ತಿದ್ದರೆ, ಬಹುಶಹ ಸೀರೆಯ ಸೆರಗು ಬಿಡುತ್ತಲೇ ಇರಲಿಲ್ಲವೇನೋ. ತಾನು ಪೋಲ್ಯಾಂಡ್ ಗೆ ವಾಪಾಸು ಹೋಗುತ್ತೇನೆಂದಾಗಲೂ, ತನ್ನೆಲ್ಲಾ ಸಂಶೋಧನಾ ಸ್ಥಾನ ಗಳನ್ನು ಬಿಟ್ಟು ಅವಳನ್ನು ಹಿಂಬಾಲಿಸಲು ಅನುವಾಗಿದ್ದ.
Erwin Schrodinger ತನ್ನ ಹೆಂಡತಿಯ ಜೊತೆ
Erwin Schrodinger ನ ಕಥೆ ಇನ್ನೂ ವಿಚಿತ್ರ. ಮೊದಲೇ ಈತನಿಗಿದ್ದ ಗೆಳತಿಯರ ಸಂಖ್ಯೆಗೆ ಲೆಕ್ಕವಿರಲಿಲ್ಲ. ಈತ ನೊಬೆಲ್ ಗಿಟ್ಟಿಸಿದ Schrodinger wave equation ನ ಉಪಾಯ ಪ್ರಣಯಿಸುತ್ತಿರುವಾಗ ಈತನಿಗೆ ಹೊಳೆದಿತ್ತಂತೆ. ಸಮಯಕ್ಕನುಸಾರವಾಗಿ quantum state ಹೇಗೆ ಬದಲಾಗುತ್ತದೆ ಎನ್ನುವದನ್ನು ವಿವರಿಸುವ ಈತನ ಸೂತ್ರ, ಕಾಮಸೂತ್ರದ ಪ್ರಯೋಗಗಳಲ್ಲಿ ಜ್ಞಾನೋದಯವಾದದ್ದು ಹಾಸ್ಯಾಸ್ಪದ.

Linus Pauling  ಮತ್ತು Ava helen Miller
ಎರಡೆರಡು ವಿಭಾಗಗಳಲ್ಲಿ ನೊಬೆಲ್ ಬಹುಮಾನ ಪಡೆದುಕೊಂಡ Linus Pauling ತನ್ನ ವಿದ್ಯಾರ್ಥಿ ಗಳ ಲೊಬ್ಬಳಾದ Ava Helen Miller ಳನ್ನೇ ಮದುವೆಯಾಗಿದ್ದ. ತರಗತಿಯಲ್ಲಿ ಕೇಳಿದ್ದ ಒಂದೇ ಒಂದು ಪ್ರಶ್ನೆಗೆ ಅವಳು ಉತ್ತರಿಸಿದ ರೀತಿ ಅವನನ್ನು ಬಹುವಾಗಿ ಮೆಚ್ಚಿಸಿತ್ತು. ಬಿಡುವಿದ್ದ ಸಮಯದಲ್ಲಿ ಹೆಂಡತಿ ಜೊತೆ ಮನಸೋ-ಇಚ್ಛೆ ಕುಣಿಯುತ್ತಿದ್ದ Pauling ಕೊನೆವರೆಗೂ ಅವಳನ್ನು ನೆನೆಸುತ್ತಿದ್ದ. ತನ್ನೆಲ್ಲಾ ಯಶಸ್ಸಿಗೆ ಅವಳೇ ಕಾರಣ ಎಂದು ಹೇಳುತ್ತಿದ್ದ.

Linus Pauling  ಮತ್ತು Ava helen Miller
ವಿಜ್ಞಾನಿಗಳು ಅವರೇ ಸೃಷ್ಟಿಸಿಕೊಂಡ ಪುಟ್ಟ ಪ್ರಪಂಚದಲ್ಲೇ ಇರುತ್ತಾರೆ. ಅವರೂ ನಮ್ಮಂತೆಯೇ ಮನುಷ್ಯರು.....ಅವರಿಗೂ ಭಾವನೆಗಳಿವೆ.....ಅವರಿಗೂ ಆಸೆಗಳಿವೆ.....ಅವರೂ ಪ್ರೀತಿಸುತ್ತಾರೆ......( ಪ್ರದೀಪ ದೇವಾಡಿಗ )


ಗುರುವಾರ, ಡಿಸೆಂಬರ್ 11, 2014

ನವ್ಯ ಕಾವ್ಯ

ಪ್ರಾಸಕ್ಕೆ ಕಟ್ ಬಿದ್ದು
ತ್ರಾಸ್ ಪಟ್ಟು
ಕಾವ್ಯ ಬರಿವಾಗ 
ಆದಿಪ್ರಾಸ, ಅಂತ್ಯಪ್ರಾಸ
ಸ್ವಲ್ಪ ಆಯಾಸ
ಎಂತಹ ವಿಪರ್ಯಾಸ
ಪ್ರಾಸಕ್ಕೆ ಪ್ರಾಸ ಸೇರಿಸಿ
ಕಾವ್ಯದ ಗುಣಮಟ್ಟ ಇಳಿಸಿ
Facebook ನಲ್ಲಿ ಅವರಿವರಿಗೆ ಓದಿಸಿ
ಕಾಸಿಗೆ ಕಾಸು ಕೂಡಿಸಿ
ಕೊನೆಗೆ ಪ್ರಕಟಿಸಿ
ದರೆ
ಅದರಲ್ಲಿ, ಉಪ್ಪಿಟ್ಟು-ಅವಲಕ್ಕಿ ಹಾಕೆಂದ
-ರಸಾಯನ ಶಾಸ್ತ್ರಜ್ಞ 
( ಪ್ರದೀಪ ದೇವಾಡಿಗ )

"ಬೆತ್ತಲೆ"

ಅಂದು Seminar Hall ನಲ್ಲಿ
Electron ಕಳೆದುಕೊಂಡ Hydrogen
ನಂತೆ
Examiner ಕೇಳಿದ ಪ್ರಶ್ನೆಗಳಿಗೆ
ಉತ್ತರಿಸಲಾಗದೆ ಬೆತ್ತಲೆಯಾಗಿದ್ದೆ.
Proton ಗಾದರೂ Nucleus ಎಂಬ
ಪದರವಿತ್ತು.
ನಿನಗೇನಿತ್ತು? ಮೂರ್ಖ ಎಂದ
-ರಸಾಯನ ಶಾಸ್ತ್ರಜ್ಞ 
( ಪ್ರದೀಪ ದೇವಾಡಿಗ )

ಬುಧವಾರ, ಡಿಸೆಂಬರ್ 10, 2014

"ನಮ್ಮ ಪ್ರವಾಸಕ್ಕೇ ಜಯವಾಗಲಿ".

"ನಮ್ಮ ಪ್ರವಾಸಕ್ಕೇ...... ಜಯವಾಗಲಿ". ಇವತ್ತು ಬೆಳಿಗ್ಗೆ Institute ಗೆ ಹೋಗುತ್ತಿರುವಾಗ ಈ ದೃಶ್ಯ ಕಂಡೆ. ನಾನು ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದಾಗ ಕೈ-ಕೈ ಹಿಡಿದುಕೊಂಡು ಪ್ರವಾಸಕ್ಕೆ ಹೋಗುತ್ತಿದ್ದ ದಿನಗಳು ನೆನಪಾಯ್ತು. ಪ್ರವಾಸ ಅಂದರೆ ಅದೇನೋ ಬಹುದೂರದ ಪ್ರೇಕ್ಷಣೀಯ ಸ್ಥಳಗಳಾಗಿರಲಿಲ್ಲ. ಬದಲಿಗೆ, ಹತ್ತಿರವಿದ್ದ ದೇವಸ್ಥಾನಗಳೋ, ಜೈನ ಬಸದಿಗಳೋ, ಸಮುದ್ರ ದಂಡೆಯೋ, ತಾಗಿಯೇ ಇದ್ದ ಪಶ್ಚಿಮ ಘಟ್ಟವೋ, ರೈಲ್ವೆ ಸ್ಟೇಶನ್ ಕೂಡ ಪ್ರವಾಸಿ ತಾಣವೇ ಆಗಿತ್ತು. ( ಆಗ ಕರಾವಳಿಯಲ್ಲಿ ರೈಲಿನ ಒಡನಾಟ ಆರಂಬವಾಗಿತ್ತಷ್ಟೆ ). ನಮ್ಮನ್ನೆಲ್ಲ ಮುನ್ನಡೆಸುತ್ತಿದ್ದವರು, ವಿಮಲಾ ಬಾಯರ್( ಟೀಚರ್) ಮತ್ತು ವೃಂದಾ ಬಾಯರ್. 

ಇದ್ದ ಒಂದೇ ಒಂದು ನಿಯಮವೆಂದರೆ, ಪ್ರತಿಯೊಬ್ಬ ಹುಡುಗನೂ,  ಹುಡುಗಿಯ ಕೈ ಹಿಡಿದು ನಡೆಯಬೇಕು. ನಾನು ರತ್ವೀಜ ಎಂಬ ಹುಡುಗಿಯ ಕೈ ಹಿಡಿಯಬೇಕಾಗಿತ್ತು. ಬೇರೆ ಯಾರಾದರೋ ಆಗಿದ್ದರೆ ಸಮಸ್ಯೆ ಇರಲಿಲ್ಲ.  ಅವಳ ಅಪ್ಪ ಉತ್ತರ ಕರ್ನಾಟಕದವನಾಗಿದ್ದ. ದಪ್ಪ ಮೀಸೆಯವನಾಗಿದ್ದ ಆತ, ಭಟ್ಕಳದ ಪೋಲೀಸ್ ಸ್ಟೇಶನ್ ನಲ್ಲಿ ಕೆಲಸ ಮಾಡುತ್ತಿದ್ದ. ಆಗ ಪೊಲೀಸರೆಂದರೆ ಏನೋ ಭಯ. ಅವಳ ಕೈ ಮುಟ್ಟುವ ಧೈರ್ಯವೇ ಬರಲಿಲ್ಲ. ಆಗಲೇ ಎಲ್ಲರೂ ಜೊತೆಗಾರ / ಗಾರ್ತಿಯರ ಕೈ ಹಿಡಿದಾಗಿತ್ತು. ಕೊನೆಗೆ ವೃಂದಾ ಬಾಯರ್ ಬಂದು......ಏನಾ,.... ಜಟ್ಟ ನ ಮಗನೆ ಮನೆಯಲ್ಲಿ ತಂಗಿ ಇಲ್ವಾ?.....ತಂಗಿಯ ಕೈ ಹಿಡಿಯುವುದಿಲ್ವಾ ಎಂದು ಗದರಿದಾಗಲೇ, ಅವಳ ಕೈ ಹಿಡಿದದ್ದು. 

ಈ ಮಕ್ಕಳನ್ನು ನೋಡಿ, "ನಮ್ಮ ಬೆಹಳ್ಳಿ, ಕೌರು, ಸರ್ಪನ ಕಟ್ಟೆ, ಮುರ್ಡೇಶ್ವರ ಪ್ರವಾಸಕ್ಕೇ....... ಜಯವಾಗಲಿ" ಎಂದು ಒದರುತ್ತಾ, ಬಾಯರ್ ಗಳಿಂದ ಗದರಿಸಿಕೊಳ್ಳುತ್ತಾ ಸಾಗುತ್ತಿದ್ದ ದಿನಗಳು ನೆನಪಾಯ್ತು. ( ಪ್ರದೀಪ ದೇವಾಡಿಗ )

ಭಾನುವಾರ, ನವೆಂಬರ್ 30, 2014

"ಸಂತೋಷಕೂಟ ನೇಪಾಳಿ ದಂಪತಿಯರ ಜೊತೆ"

ಅತ್ತ ಮೋದಿಜಿ SAARC ಸಮ್ಮೇಳನಕ್ಕಾಗಿ ನೇಪಾಳಕ್ಕೆ ಹೋಗಿದ್ದರೆ, ನಾನು ನನ್ನದೇ ಅಪಾರ್ಟ್ಮೆಂಟ್ ನಲ್ಲಿರುವ ನೇಪಾಳಿ ದಂಪತಿ ಗಳು ( Maan Rokaya, Binu Rokaya ) ರನ್ನು ಸಂತೋಷಕೂಟಕ್ಕೆ ಆಹ್ವಾನಿಸಿದ್ದೆ. 

Maan Rokaya and Binu Rokaya

ಅದರಲ್ಲೂ Maan ನು ಏಡಿ ( crab ) ತಿನ್ನಬೇಕೆಂಬ ಆಸೆಯನ್ನು ನನ್ನ ಬಳಿ ಹೇಳಿಕೊಂಡಿದ್ದನಾದರೂ, ಅದನ್ನು ಪೂರೈಸಲು ನನ್ನಿಂದ ಆಗಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಈ ಏಡಿ ( crab ) ಗಾಗಿ, ಪ್ರಾಗ್ ( Prague, Czech Republic) ನ ಮೂಲೆ-ಮೂಲೆ ಕೂಡ ಹುಡುಕಿದ್ದೇನೆ. ಸೂಪರ್ ಮಾರ್ಕೆಟ್, ಫಾರ್ಮರ್ಸ್ ಮಾರ್ಕೆಟ್ ಎಲ್ಲವನ್ನೂ ತಡಕಾದಿದ್ದೆ. ಎಲ್ಲಿಯೂ ಕಣ್ಣಿಗೆ ಬಿದ್ದಿರಲಿಲ್ಲ. 


albert super market
ಮೊನ್ನೆ ಭೇಟಿಯಾದ ಯಾಂಗ್ ಎನ್ನುವವನು ವಿಯೇಟ್ನಯಾಮಿ ಮಾರ್ಕೆಟ್ ( SAPA ) ಅನ್ನು ಪರಿಚಯಿಸಿದ. 




ಮರಳುಗಾಡಿನಲ್ಲಿ ಓಯಾಸಿಸ್ ಕಂಡ ಅನುಭವ ನನಗೆ. ಭಟ್ಕಳದ ಮೀನು ಮಾರ್ಕೆಟಿನಲ್ಲಿ ಸಿಗುವ ಎಲ್ಲ ಉತ್ಪನ್ನಗಳೂ ಇಲ್ಲಿ ಇತ್ತು. ( ಮೀನು ಮಗ್ತಿಯರು=ಮೀನು ಮಾರುವ ಹೆಂಗಸರ, ಬಿಟ್ಟು). 


 ಬಂಗಡೆ ಮೀನು

ಏಡಿ ( ಜಳ್ಳಿ )
ಎರಡು ದೊಡ್ಡ "ಬಂಗಡೆ ಮೀನು" ಮತ್ತು "ಏಡಿ"ಗಳನ್ನು ತೆಗೆದುಕೊಂಡು ಬಂದೆ. 



ಮನೆಯಲ್ಲಿ ಅಮ್ಮ ಮೀನು ಕೊಚ್ಚುವುದನ್ನು ನೋಡಿದ್ದರೂ, ಸ್ವತಹ ಪ್ರಯೋಗ ಮಾಡಿದಾಗಲೇ ಗೊತ್ತಾಗಿದ್ದು ಅದರ ಕಷ್ಟ. 



ಇನ್ನು ಏಡಿ ದಂತೂ ಕೇಳಲೇಬೇಡಿ. 



ಹೊದಿಯಾಕಾರದ ಕ್ಯಾಲ್ಶಿಯಮ್ ಚಿಪ್ಪನ್ನು ತೆಗೆಯುವಾಗ,ಅದರ ಸುತ್ತಲೂ ಇರುವ ಚಿಕ್ಕ-ಚಿಕ್ಕ ಮುಳ್ಳಿನಿಂದ ಬೆರಳು ಗೀರಿಕೊಂಡು ರಕ್ತ ಸುರಿಸಿದ್ದೂ ಆಯ್ತು.


ಚೆನ್ನಾಗಿ ತೊಳೆದು "ಸಾರು" ಮಾಡಲು ಮತ್ತು "ಹುರಿ"ಯಲು ಕತ್ತರಿಸಿದ್ದೇನೆ


ಮನೆಯಲ್ಲಿದ್ದರೆ, "ಬಾಲ್ ಕಡಿ" ಗಾಗಿ ಹೊಡೆದಾಡುತ್ತಿದ್ದೆವು
ಬಾಲ್ ಕಡಿ 

ಭಾರತದಿಂದಲೇ ತೆಗೆದುಕೊಂಡ ಬಂದ ಶಕ್ತಿ ಮಸಾಲಾ ಮತ್ತು ಲಾಹೋರಿ ಮಸಾಲಾ




ಮಸಾಲೆ ಯನ್ನು ಚೆನ್ನಾಗಿ ಹಾಕಿ ಮಿಕ್ಸ್ ಮಾಡಿದ್ದೇನೆ.



ಸ್ವಲ್ಪ ಸಾರಿಗೆ ಸ್ವಲ್ಪ ಹುರಿಯಲು



ಸಾರಿಗೆ, ಈರುಳ್ಳಿ, ಟೊಮ್ಯಾಟೋ, ಶುಂಟಿ ಮತ್ತು ಬೆಳ್ಳುಳ್ಳಿ




ಸಾರು ಮಾಡ್ತಾ ಇದ್ದೇನೆ



ಸ್ವಲ್ಪ ಪೋಸು

ಪುನಹ ತಲ್ಲೀನ


ರೆಡೀ


Binu, Maan, Yong

Binu, Maan  mattu naanu
Yong ತಯಾರಿಸಿದ Egg soup


Maan ತಯಾರಿಸಿದ chicken gravy 

ನಾನೇ ತಯಾರಿಸಿದ  Buter chicken



ನಾನೇ ಮಾಡಿದ ಜಳ್ಳಿ ಸಾರು



ಅನ್ನ ಕುದಿ ಬರ್ತಾ ಇದೆ


Lu Yong ಕಷ್ಟ ಪಡ್ತಾ ಇದ್ದಾನೆ





Maan ನ  recipe ಮಾತ್ರ ಯಾವಾಗಲೂ ಅದ್ಭುತ




ಮಾನ್ ತಯಾರಿಸಿದ್ದು.

ಅನ್ನವೂ ರೆಡೀ ಆಯ್ತು



ನಂಜು ಕೊಳ್ಳಲು ಒಂದಷ್ಟು ಹಸಿಮೆಣಸು ಮತ್ತು  ಸಲಾಡ್


Lu Yong ಸೂಪ್ ತಯಾರಿಸುವುದರಲ್ಲಿ ಎತ್ತಿದ ಕೈ




Fish fry ನಾನೇ ಮಾಡಿದ್ದು

 
Lu Yong ಮಾಡಿದ್ದು

Maan's Chicken gravy

ಮೀನು ಸಾರು

ಊಟ ಮಾಡುತ್ತಲೇ ಮುಂದುವರಿದ ಚರ್ಚೆ ಸುಮಾರು ರಾತ್ರಿ 11 :00 ಘಂಟೆ ಯಾಗುವ ವರೆಗೂ ನಿಂತಿರಲಿಲ್ಲ. ಭಾರತದ ಪ್ರಸಕ್ತ ರಾಜಕಾರಣ ದಿಂದ ಶುರುವಾದ ಚರ್ಚೆ, ನೇಪಾಳ್, ಚೀನಾ, ಯುರೋಪ್ ಅನ್ನು ದಾಟಿ ಅಮೇರಿಕ ಅಧ್ಯಕ್ಷ ಒಬಾಮಾ ನ ವರೆಗೂ ಹೋಯಿತು. ಗಣರಾಜ್ಯೋತ್ಸವದ ದಿನ ಭಾರತದ ತ್ರಿವರ್ಣ ಬಾವುಟಕ್ಕೆ ವಂದಿಸಲು ಬರುತ್ತಿರುವ ಒಬಾಮಾ ನಿಗೆ ಶುಭ ಹಾರೈಸಿ, ವಿದಾಯ ಹೇಳಿದೆವು. ( ಪ್ರದೀಪ ದೇವಾಡಿಗ )