ಮತ್ತೆ ಗಣೇಶ ಚೌತಿ ಬಂದಿದೆ. Facebook ನಂತಹ social media ದಲ್ಲಿ ಬುದ್ದಿ(??)ಜೀವಿಗಳ "ಓರಾಟ" ಕೂಡ ಅದಾಗಲೇ ಶುರುವಾಗಿದೆ ಅಷ್ಟಕ್ಕೂ, ನನಗಿದು ನೆನಪಾಗಿದ್ದು, Mr. ಪವನ್ ರವರನ್ನು ಹೂವಿನ ಮಾರ್ಕೆಟ್ ನಲ್ಲಿ ನೋಡಿದ ಮೇಲೆ. ನನಗೆ ಆಶ್ಚರ್ಯ, ಆಘಾತ ಒಟ್ಟಿಗೆ ಆಯಿತು. ಏನ್ರೀ ನೀವಿಲ್ಲಿ ಅಂದಾಕ್ಷಣ ಒಮ್ಮೆಲೆ ಬೆಚ್ಚಿಬಿದ್ದರು. ನನಗೆ ಗೊತ್ತಿರುವ ಹಾಗೆ ಅವರು ಸಂಪ್ರದಾಯದ ವಿರೋಧಿಗಳು. ಆಮೇಲೆ ತಿಳಿದ್ದದ್ದು ಏನೆಂದರೆ,ಅವರು ಬಂದಿದ್ದು ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಕೊಳ್ಳಲು, ಹೆಂಡತಿ ಶೈಲ ಹೇಳಿ ಕಳಿಸಿದ್ದಳಂತೆ, ನಿಮ್ಮ "ಓರಾಟ" ಏನಿದ್ರೂ facebook ನಲ್ಲಿ ಇರಲಿ.ಮನೆಗೆ ಏನಾದ್ರೂ ಇಂತಹ ಹಗರಣ ತಗೊಂಡು ಬಂದ್ರೆ ನೆಟ್ಟಗಿರಲ್ಲ ಅಂತ.
ಇನ್ನೊಬ್ಬ ಪತಿವ್ರತೆ ಯೊಬ್ಬಳು ಸ್ವಲ್ಪ ಮುಂದೆ ಹೋಗಿ ಗಣೇಶ ಯಾರು? ಅವನ ಹುಟ್ಟು ಹೇಗಾಯ್ತು ಅಂತ ಡೊನೇಶನ್ ಕೇಳಲು ಬಂದವರಿಗೆ ತಿಳಿಸಿ ಹೇಳಿದ್ದನ್ನು ಪೇಪರ್ ನಲ್ಲಿ ಬರೆದುಕೊಂಡಿದ್ದಳು. ಅವಳ ಹೆಸರು "ಗೌರಿ".
ಜೀವನವಿಡೀ ಸಂಪ್ರದಾಯ, ಪದ್ದತಿ, ಧರ್ಮಕ್ಕೆ ಅನುಗುಣವಾಗಿ ನಡೆದುಕೊಂಡು ಬಂದ, ಅದನ್ನು ಪಾಲಿಸಿದ, ಭೋದಿಸಿದ ಸನ್ಯಾಸಿಯೊಬ್ಬ ತನ್ನ ದೇಹವನ್ನು ದಾನ ಮಾಡಿದ್ದ. ಅದೇ ಸಂಪ್ರದಾಯಕ್ಕೆ ವಿರುದ್ದವಾಗಿ ಬದುಕಿದವನ ಅಂತ್ಯಸಂಸ್ಕಾರ ಬ್ರಾಹ್ಮಣರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತ್ತು.
ಅಂದಹಾಗೆ ನಾನ್ಯಾರ ವಿರೋಧಿ ಕೂಡ ಅಲ್ಲ. ಇನ್ನೂ ಡೊನೇಶನ್ ಕಲೆಕ್ಟ್ ಮಾಡುವುದಕ್ಕೆ ನನ್ನ ತೀವ್ರ ವಿರೋಧ ಇದೆ. ಇನ್ನೊಬ್ಬರ ಜೇಬಿಗೆ ಕತ್ತರಿ ಹಾಕುವ ಆಚರಣೆ ನಮಗೆ ಬೇಡ. ನಮ್ಮ ಸಂತೋಷದಲ್ಲಿ ಭಾಗಿಯಾಗಿ ತಮ್ಮ ಸಂತೋಷವನ್ನು ಇಮ್ಮಡಿಸಿಕೊಳ್ಳುವವರನ್ನು ನಾವು ಸೇರಿಸಿಕೊಳ್ಳೋಣ.
ನನ್ನದೊಂದು request, ಜಗತ್ತು ಬದಲಾಯಿಸುವ ಮೊದಲು ನಿಮ್ಮನ್ನು ಬದಲಾಯಿಸಿಕೊಳ್ಳಿ. ಸಾಧ್ಯವಾದರೆ ನಿಮ್ಮ ಮನೆಯನ್ನು ಬದಲಾಯಿಸಿ. ಅಂತರಂಗ ಶುದ್ದಿ ಬಹಿರಂಗ ಶುದ್ದಿಗೆ ಪ್ರಾಮುಖ್ಯತೆ ಕೊಡಿ. ಸತ್ಯವನ್ನು ನುಡಿಯಿರಿ. ಪ್ರಾಮಾಣಿಕವಾಗಿ ದುಡಿಯಿರಿ. ನ್ಯಾಯಯುತವಾಗಿ ಜೀವಿಸಿರಿ. ಇನ್ನಾದರೂ, ಸಶಕ್ತವಾದ, ಪಕ್ಷಪಾತ ಮಾಡದಿರುವ, ಧರ್ಮಬೇಧವಿಲ್ಲದ, ರಾಷ್ಟ್ರಭಕ್ತಿ, ದೇಶಪ್ರೇಮ ಉಳ್ಳ, ಸಂವಿಧಾನದಲ್ಲಿ ಉಲ್ಲೇಖಿಸಿರುವ ಕರ್ತವ್ಯಗಳನ್ನು ಪಾಲಿಸುವ, ಆರೋಗ್ಯ ಕರವಾದ ಸಮಾಜವನ್ನು ಕಟ್ಟೋಣ.( ಪ್ರದೀಪ ದೇವಾಡಿಗ )